Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
dEvata tAratamya

ದೇವತಾ ತಾರತಮ್ಯ       

1. ಪರಮ ಪುರುಷ ನಾರಾಯಣ
2. ಪರಾಪ್ರಕೃತಿ ಶ್ರೀ-ಭೂ-ದುರ್ಗಾರೂಪಳಾದ  ಲಕ್ಷ್ಮಿ
3.  ಬ್ರಹ್ಮ ಮತ್ತು ಪ್ರಧಾನ ವಾಯು
4. ಸರಸ್ವತಿ-ಭಾರತೀದೇವಿಯರು
5. ಗರುಡ-ಶೇಷ-ರುದ್ರ
6.  ಷಣ್ಮಹಿಷಿಯರು (ನೀಳಾ, ಭದ್ರಾ, ಮಿತ್ರವಿಂದಾ, ಕಾಳಿಂದೀ,  ಲಕ್ಷಣಾ ಮತ್ತು ಜಾಂಬವತೀ)
7. ಸುಪರ್ಣಿ- ವಾರುಣಿ-ಪಾರ್ವತಿ
8. ಇಂದ್ರ-ಕಾಮರು
9.  ಅಹಂಕಾರಿಕ ಪ್ರಾಣದೇವರು[೪೯ ಮರುತ್ತುಗಳಲ್ಲಿ ಪ್ರಧಾನ]
10. ಶಚಿದೇವಿ; ರತಿದೇವಿ; ಕಾಮಪುತ್ರನಾದ ಅನಿರುದ್ಧ; ದೇವಗುರು ಬೃಹಸ್ಪತಿ ;  ಸ್ವಯಂಭುವ ಮನು; ದಕ್ಷಪ್ರಜಾಪತಿ

11. ಪ್ರವಾಹ ವಾಯು [೪೯ ಮರುತ್ತುಗಳಲ್ಲಿ ಎರಡನೆಯವ]
12. ಸೂರ್ಯ; ಪ್ರಧಾನ ಪಿತೃಪತಿಗಳಾದ  ಚಂದ್ರ ಮತ್ತು ಯಮ;  ಸ್ವಯಂಭುವ ಮನು ಪತ್ನಿಯಾದ  ಶತರೂಪಾದೇವಿ
13.ವರುಣ
14. ನಾರದ
15.  ಭೃಗು; ಅಗ್ನಿ; ದಕ್ಷಪ್ರಜಾಪತಿ ಪತ್ನಿಯಾದ ಪ್ರಸೂತಿ ದೇವಿ

16.  ವಿಶ್ವಾಮಿತ್ರ; ವೈವಸ್ವತಮನು;  ಮರೀಚಿ, ಅತ್ರಿ, ಅಂಗಿರಸ್, ಪುಲಸ್ಯ, ಪುಲಹ, ಕ್ರತು, ಮತ್ತು  ವಸಿಷ್ಟ
17.  ಮಿತ್ರ; ನಿರೃತಿ; ಬೃಹಸ್ಪತಿಯ ಪತ್ನಿಯಾದ ತಾರೆ ಮತ್ತು ಪ್ರವಹವಾಯುವಿನ ಪತ್ನಿ ಪ್ರಾವಹಿದೇವಿ
18.  ಗಣಪತಿ;  ಕುಬೇರ;  ವಾಯುಪುತ್ರನಾದ ವಿಶ್ವಕ್ಸೇನ; ಅಶ್ವಿಗಳು;  ೭ ಮಂದಿ  ವಸುಗಳು; ಆರು ಮಂದಿ ಆದಿತ್ಯರು (ಧಾತಾ, ಆರ್ಯಮ, ತ್ವಷ್ಟಾ, ಸವಿತಾ, ಭಗ ಮತ್ತು  ಪೂಷಾ); ಹತ್ತು ಮಂದಿ  ವಿಶ್ವೇದೇವತೆಗಳು;  ಏಕಾದಶ ರುದ್ರರಲ್ಲಿ ಪ್ರಧಾನ ರುದ್ರನನ್ನು ಬಿಟ್ಟು ಉಳಿದ ಹತ್ತು ಮಂದಿ ರುದ್ರರು; ೪೯ ಮರುತ್ತುಗಳಲ್ಲಿ ಅಹಂಪ್ರಾಣ ಮತ್ತು ಪ್ರವಾಹನನ್ನು ಬಿಟ್ಟು ಉಳಿದ ೪೭ ಮಂದಿ ಮರುತ್ತುಗಳು; ಪಿತೃಪತಿಗಳಲ್ಲಿ ಮೂರನೆಯವನಾದ ಕವ್ಯವಾಹ; ಋಭುಗಳು(ಋಭು, ವಿಭ್ವಾ ಮತ್ತು ವಾಜ), ದ್ಯಾವಾ ಪೃಥವೀ ದೇವಿಯರು.  
19.  ಪ್ರಧಾನ ವಾಯುವಿನ ಪುತ್ರನಾದ ಮರೀಚಿ; ಅಗ್ನಿಪುತ್ರ ಪಾವಕ; ಪಾದದ ದೇವತೆಗಳಾದ ಇನ್ದ್ರಪುತ್ರ ಜಯಂತ ಮತ್ತು ಶಂಭು;  ದೈತ್ಯಗುರು ಶುಕ್ರ; ಶುಕ್ರನ ಸಹೋದರ ಚ್ಯವನ;  ಬೃಹಸ್ಪತಿ ಸಹೋದರ ಉಚಥ್ಯ; ಬ್ರಹ್ಮಮಾನಸಪುತ್ರರಲ್ಲಿ ಸನತ್ದಕುಮಾರನನ್ನು ಬಿಟ್ಟು ಉಳಿದ ಮೂವರಾದ   ಸನಕ, ಸನಂದನ ,ಸನಾತನ ಮತ್ತು ೭ ಮಂದಿ ಊರ್ಧ್ವರೇತಸ್ಕರು; ಕಶ್ಯಪನೇ ಮೊದಲಾದ ೮೦ ಮಂದಿ ಗೃಹಸ್ಥ ಋಷಿಗಳು;  ಭಾವೀ ಮನ್ವಂತರದ ೭ ಮಂದಿ ಇನ್ದ್ರರು(ಬಲಿ, ಅಧ್ಬುತ, ಶಂಭು, ವಿಧೃತಿ, ಋತುಧಾಮ, ದಿವಸ್ಪತಿ ಮತ್ತು ಶುಚಿ);  ಸ್ವಾಯಮ್ಭುವ ಮನು, ನಾರಾಯಣನ ಅವತಾರವಾದ ತಾಪಸ ಮನು ಮತ್ತು ವೈವಸ್ವತಮನು- ಈ ಮೂರು ಮನುಗಳನ್ನು ಬಿಟ್ಟು ಉಳಿದ ೧೧ ಮಂದಿ ಮನುಗಳು; ಚಂದ್ರ-ಯಮ ಮತ್ತು ಕವ್ಯವಾಹ ಈ ಮೂರು ಪಿತೃಪತಿಗಳನ್ನು ಬಿಟ್ಟು ಉಳಿದ ೭ ಮಂದಿ ಪಿತೃಪತಿಗಳು; ೮ ಮಂದಿ ದ್ವಾರಪಾಲಕರು(ಜಯ, ವಿಜಯ, ಚಂದ, ಪ್ರಚಂಡ, ನಂದ, ಸುನಂದ, ಕುಮುದ ಮತ್ತು ಕುಮುದೇಕ್ಷಣ; ೮ ಮಂದಿ ಪ್ರಧಾನ ಗಂಧರ್ವರು; ೮ ಮಂದಿ ಅಪ್ಸರೆಯರು; ವಿಶ್ವಕರ್ಮ; ಚಿತ್ರಗುಪ್ತ; ಸೂರ್ಯಸಾರಥಿ; ಅರುಣ; ಐರಾವತ; ನಂದಿ; ಸುರಭಿ; ಕಲ್ಪವೃಕ್ಷಾದಿ ದೇವತೆಗಳು; ಅಹೋರಾತ್ರಿ ದೇವತೆಗಳು; ಹುಣ್ಣಿಮೆ-ಅಮವಾಸ್ಯಾ ದೇವತೆಗಳು; ಅಭಿಜಿತ್ -ವಿಷುವದ್  ದೇವತೆಗಳು; ಓಷದಿ-ವನಸ್ಪತಿ ದೇವತೆಗಳು; ಪರ್ವತ-ತಟಾಕಾದಿ ದೇವತೆಗಳು; ಹವಿಃ -ಕಪಾಲಾದಿ ದೇವತೆಗಳು; ಕರ್ಮದೇವತೆಗಳಾದ ೧೦೦ ಮಂದಿ ರಾಜರ್ಷಿಗಳು (ಪೃಥು; ಕಾರ್ತವೀರ್ಯ; ಶಶಬಿಂದು; ಪ್ರಿಯವ್ರತ; ಉತ್ತಾನಪಾದ; ಮಾಂಧಾತಾ; ಗಯಾ; ಕಕುತ್ಥ್ಸ; ಸಹುಷ; ಅಂಬರೀಷ; ಋಷಭನಪುತ್ರನಾದ ಭರತ; ದುಃಷಂತನ ಪುತ್ರನಾದ ಭರತ; ಮರುತ್ತು; ಹರಿಶ್ಚಂದ್ರ; ಪ್ರಹ್ಲಾದ; ಪರೀಕ್ಷತ ಮೊದಲಾದವರು) 

20. ಪರ್ಜನ್ಯ; ಅನಿರುದ್ಧನ ಪತ್ನಿಯಾದ ಉಷಾದೇವಿ; ಚಂದ್ರನ ಪತ್ನಿಯಾದ ರೋಹಿಣಿ; ಸೂರ್ಯ ಪತ್ನಿಯಾದ ಸಂಜ್ಞೆ; ಯಮನ ಪತ್ನಿಯಾದ ಶ್ಯಾಮಲಾ ಮತ್ತು ವರುಣನ ಪತ್ನಿ ಗಂಗಾ.
೨೧. ಕೂರ್ಮಾದಿ ಕೆಲವು ಅನಖ್ಯಾತ ದೇವತೆಗಳು
22. ಅಗ್ನಿಪತ್ನಿ ಸ್ವಾಹಾ
23. ಜಲಾಭಿಮಾನಿ ಬುಧ
24.  ಅಶ್ವಿಗಳ ಪತ್ನಿಯಾದ ಉಷಸ್
25. ಕುಜ (ಕೆಲವರ ಅಭಿಪ್ರಾಯದಂತೆ ಕುಜ ಮತ್ತು ರಾಹು ಕೇತುಗಳು ೧೯ನೇ ಕಕ್ಷ್ಯಯಲ್ಲಿ ಬರುತ್ತಾರೆ)
26. ಪೃಥವಿಯ ಅಭಿಮಾನಿಯಾದ ಶನಿ
27.ವರುಣಪುತ್ರ, ಕರ್ಮಾಭಿಮಾನಿ ಪುಷ್ಕರ
28. ಕಾಶ್ಯಪಮುನಿ ಪತ್ನಿ ಅದಿತಿ(ದೇವಕಿ) ಮತ್ತು ದ್ರೋಣವಸುವಿನ ಪತ್ನಿ ಧರಾ(ಯಶೋದೆ)
29.ಕೃಷ್ಣಪತ್ನಿಯರಾಗಿ ಜನಿಸಿದ ೧೯೧೦೦ ಮಂದಿ ಅಗ್ನಿಪುತ್ರರು
30.ಅನಾಖ್ಯಾತರಾದ ಆಜಾನಜ ದೇವತೆಗಳು; ೧೦೦ ಮಂದಿ ಗಂಧರ್ವರು; ೧೦೦ ಮಂದಿ ಅಪ್ಸರೆಯರು; ಶತಕೋಟಿ ಋಷಿಗಳಲ್ಲಿ ಹಿಂದೆ ಹೇಳಿದ ೧೦೦ ಮಂದಿಯನ್ನು ಬಿಟ್ಟು ಉಳಿದ ೯೯,೯೯,೯೯,೯೦೦ ಮಂದಿ ಋಷಿಗಳ ಗಣ
31. ಹಿಂದೆ ಹೇಳಿದ ಏಳುಮಂದಿ ಪಿತೃಪತಿಗಳ ಸಂತತಿಯಾದ ಚಿರಪಿತೃಗಳ ಗಣ
32.ಗಂಧರ್ವರ ಮತ್ತು ಅಪ್ಸರೆಯಾರ ಗಣ(ಹಿಂದೆ ೧೯ನೇ ಕಕ್ಷ್ಯಯಲ್ಲಿ  ಹೇಳಿದ ೮ ಮಂದಿ ಮತ್ತು ೨೯ನೇಕಕ್ಷ್ಯದಲ್ಲಿ ಹೇಳಿದ ೧೦೦ ಮಂದಿಯನ್ನು ಬಿಟ್ಟು)
33. ಮನುಷ್ಯ ಗಂಧರ್ವರು

ಇದು ಶಾಸ್ತ್ರದಲ್ಲಿ ಉಲ್ಲೇಖಗೊಂಡ ದೇವತಾ ಸಮುದಾಯದ ಸಂಕ್ಷಿಪ್ತ ಚಿತ್ರಣ. ಇಲ್ಲಿ ಒಂದು ಕಕ್ಷ್ಯಯ ಗುಂಪಿನಲ್ಲಿ ಬಂದಿರುವ ಎಲ್ಲಾ ದೇವತೆಗಳು ಸಮಾನರು.  ಕೆಳಗಿನ ಕಕ್ಷ್ಯಯವರು ಮೇಲಿನ ಕಕ್ಷ್ಯಯವರಿಗಿಂತ ಅಧಮರು.  ಹೀಗೆ ೩೩ ಕಕ್ಷ್ಯಗಳಲ್ಲಿ, ೩೩ ಮೆಟ್ಟಿಲುಗಳಲ್ಲಿ ಪ್ರಾಚೀನರು ದೇವತಾ ತಾರತಮ್ಯವನ್ನು ಗುರುತಿಸಿದ್ದಾರೆ. ಇಲ್ಲಿ ಹೇಳಿರುವ ಎಲ್ಲಾ ದೇವತೆಗಳು ನಮ್ಮ ಅಂಗಾಂಗಗಳಲ್ಲಿದ್ದು ನಮ್ಮ ಬದುಕನ್ನು ನಿಯಂತ್ರಿಸಿ ನಮ್ಮನ್ನು ಸಾಧನೆಯ ಹಾದಿಯಲ್ಲಿ ಮುನ್ನೆಡೆಸುವವರು. ಇವರ ಆನಂತರ ೩೪ನೇ ಕಕ್ಷ್ಯಯವರು ಚಕ್ರವರ್ತಿಗಳು; ೩೫ನೇ ಕಕ್ಷ್ಯಯವರು ಮುಕ್ತಿಯೋಗ್ಯರಾದ ಮನುಷ್ಯೊತ್ತಮರು. ಈ ಎಲ್ಲರಲ್ಲೂ ಅಂತರ್ಯಾಮಿಯಾಗಿರುವ ಭಗವಂತನೇ ಮುಖ್ಯಪ್ರೇರಕ. ಅನಂತರೂಪಗಳಿಂದ ಅವನು ಎಲ್ಲಾ ದೇವತೆಗಳಒಳಗೂ ಪ್ರವೇಶಿಸಿ ಅವರ ಹೃದಯದಲ್ಲಿ ನೆಲಸಿರುವುದರಿಂದ ಅವನು 'ವಿಶ್ವ'ನೆನಿಸಿದ್ದಾನೆ.  
[ಹೆಚ್ಚಿನ ಮಾಹಿತಿಗಾಗಿ ಆಚಾರ್ಯರ ಶಿವಸ್ತುತಿ-ನರಸಿಂಹಸ್ತುತಿ ಪುಸ್ತಕವನ್ನು ಓದಿ  ಹಾಗು   ಉಪನಿಷತ್ ಪ್ರವಚನವನ್ನಾಲಿಸಿ].  
  


No comments:

Post a Comment