Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, July 31, 2011

Bhagavad Geeta Kannada Chapter-09 Shloka 17


ಪಿತಾSಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ
ವೇದ್ಯಂ ಪವಿತ್ರಮೋಂಕಾರ ಋಕ್ ಸಾಮ ಯಜುರೇವ ಚ      ೧೭

ಪಿತಾಮ್ ಅಸ್ಯ ಜಗತಃ  ಮಾತಾ ಧಾತಾ ಪಿತಾಮಹಃ
ವೇದ್ಯಮ್  ಪವಿತ್ರಮ್ ಓಂಕಾರಃ  ಋಕ್ ಸಾಮ ಯಜುಃ ಏವ  ಚ- ನಾನು ಈ ಜಗದ ತಂದೆ, ತಾಯಿ, ಪೋಷಕ ಮತ್ತು ಅಜ್ಜ-ಮುತ್ತಜ್ಜ.[ಸಲಹುವುದರಿಂದ ‘ಪಿತೃ’. ಅರಿಯುವುದರಿಂದ ‘ಮಾತೃ’. ಬೆಳೆಯುವುದರಿಂದ ‘ಧಾತೃ’. ತಂದೆಗಿಂತಲೂ ಹಿರಿಯನಾದ್ದರಿಂದ ‘ಪಿತಾಮಹ’] ಜಗವೆಲ್ಲ ತಿಳಿಯಬೇಕಾದವನು. ಜಗಕೆ ಪಾವನನಾದವನು. ಓಂಕಾರದಿಂದ, ಋಗ್ವೇದ-ಸಾಮವೇದ-ಯಜುರ್ವೇದಗಳಿಂದ ವಾಚ್ಯನಾದವನು. [‘ಓಂ’ ಎಂದು ಕರೆಸಿಕೊಳ್ಳುವುದರಿಂದ ‘ಓಂಕಾರ’. ಪೂಜನೀಯನಾದ್ದರಿಂದ ‘ಋಕ್’. ಸಮಾನನಾದ್ದರಿಂದ ‘ಸಾಮ’. ಯಜ್ಞಗಳಿಂದ ಆರಾಧ್ಯನಾದ್ದರಿಂದ ‘ಯಜುಸ್’]

ಬದುಕಿನ ಸಂಬಂಧಗಳಿಗೆ ಸಂಬಂಧಿಸಿ ಭಗವಂತನ ಉಪಾಸನೆಯನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ “ಪಿತಾಮ್ ಅಸ್ಯ ಜಗತಃ  ಮಾತಾ ಧಾತಾ ಪಿತಾಮಹಃ” ಎಂದು. ಅಂದರೆ “ನಾನೆ ತಂದೆ, ನಾನೆ ತಾಯಿ, ನಾನೆ ಧಾರಕ ಮತ್ತು ಪಿತಾಮಹ”. ನಮಗೆ ತಿಳಿದಂತೆ ಒಬ್ಬರು ತಂದೆಯಾಗಬಹುದು ಅಥವಾ ತಾಯಿಯಾಗಬಹುದು. ಆದರೆ ಒಬ್ಬರೇ ತಾಯಿ ಮತ್ತು ತಂದೆ ಎರಡೂ ಆಗುವುದು ಸಾಧ್ಯವಿಲ್ಲ. ಇದು ಭಗವಂತನಲ್ಲಿ ಮಾತ್ರ ಸಾಧ್ಯ. ಭಗವಂತ ಎಲ್ಲರಿಗೂ ಅಪ್ಪ ಮತ್ತು ಎಲ್ಲರಿಗೂ ಅಮ್ಮ. ತಂದೆಯೊಳಗೆ ‘ತಂದೆ’ಯಾಗಿ, ತಾಯಿಯೊಳಗೆ ‘ತಾಯಿ’ಯಾಗಿ ತುಂಬಿರುವ ಶಕ್ತಿ ಆ ಭಗವಂತ. ಇದನ್ನು ನಾವು ಈ ರೀತಿ ಸ್ತುತಿಸುತ್ತೇವೆ:       
ತ್ವಮೇವ ಮಾತಾಚ ಪಿತಾ ತ್ವಮೇವ
ತ್ವಮೇವ ಬಂದುಶ್ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವ
ಗಾಯತ್ರಿಯಲ್ಲಿ ಮೂಲತಃ ಈ ಅನುಷ್ಠಾನವಿದೆ. “ತತ್ಸವಿತುರ್ವರೇಣ್ಯಂ ಭರ್ಗಃ” ಎನ್ನುವಲ್ಲಿ ಭಗವಂತ ಜಗತ್ತನ್ನು ಸೃಷ್ಟಿ ಮಾಡಿದ ತಂದೆ ಎನ್ನುವ ಅರ್ಥವಿದೆ.  ‘ಸವಿತ’. ಎಂದರೆ ಜಗತ್ತನ್ನು ಹೆತ್ತವನು ಎಂದರ್ಥ. ಪ್ರಳಯಕಾಲದಲ್ಲಿ ಜಗತ್ತನ್ನು ತನ್ನ ಉದರದಲ್ಲಿ ಧರಿಸಿ, ಸೃಷ್ಟಿ ಕಾಲದಲ್ಲಿ ಅದನ್ನು ಭಗವಂತ ಹೆತ್ತ. ಹೆತ್ತು ಹೊತ್ತು ಸಲಹುವವಳು ‘ತಾಯಿ’-ಆದ್ದರಿಂದ ಭಗವಂತ ತಾಯಿಯೂ ಹೌದು. ಅಷ್ಟೇ ಅಲ್ಲ, ಪ್ರತಿಯೊಬ್ಬ ತಾಯಿಯೊಳಗಿದ್ದು ಆ ತಾಯಿಯ ತಾಯ್ತನವನ್ನು ಜಾಗೃತಗೊಳಿಸಿ, ತಾಯಿಯೊಳಗೆ ತಾಯಿಯಾಗಿ ತುಂಬಿರುವ ಭಗವಂತ, ಎಲ್ಲ ತಂದೆಯಂದಿರ ಒಳಗೂ ಇದ್ದು, ಅವರಲ್ಲಿ ಪಿತೃತ್ವ ಜಾಗೃತಗೊಳಿಸುವ ತಂದೆ. ಪಿತಾ ಅನ್ನುವ ಪದದ ನಿರ್ವಚನ ನೋಡಿದರೆ ‘ತಂದೆ’ ಅನ್ನುವುದು ಕೇವಲ ರೂಢಿ ಅರ್ಥ. ಶ್ರುತಿಯಲ್ಲಿ ಹೀಗೆ ಹೇಳುತ್ತಾರೆ:
ಯೋ ನಃ ಪಿತಾ ಜನಿತಾ ಯೋ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ|
ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ||
ಇಲ್ಲಿ ಪಿತಾ ಮತ್ತು ಜನಕನನ್ನು ಬೇರೆ ಬೇರೆಯಾಗಿ ಹೇಳುತ್ತಾರೆ. ಅವನು ನಮ್ಮ ತಂದೆ, ಅವನು ನಮ್ಮ ಜನಕ. ಅಂದರೆ: ಹುಟ್ಟಿಸಿದವನೂ ಅವನೇ, ರಕ್ಷಕನೂ ಅವನೆ.
ಲೋಕದಲ್ಲಿ ಗಂಡು ಹೆಣ್ಣಲ್ಲ, ಹೆಣ್ಣು ಗಂಡಲ್ಲ. ಆದರೆ ಭಗವಂತ ಎಲ್ಲರ ಬಿಂಬರೂಪ. ಆದ್ದರಿಂದ ಭಗವಂತ ಉಭಯಲಿಂಗ-ಆತ ಸ್ತ್ರೀಪುಂಸಕ. ಆದರೆ ಆತನಲ್ಲಿ ಸ್ತ್ರೀಯಲ್ಲಿರುವ ದೋಷವಾಗಲಿ, ಪುರುಷನಲ್ಲಿರುವ ದೋಷವಾಗಲೀ ಇಲ್ಲ. ಆದ್ದರಿಂದ ಆತ ಲಿಂಗಾತೀತಕೂಡಾ ಹೌದು.[ಇದನ್ನು ನಾವು ಭಗವಂತನ ನಾಮಾವಳಿಗಳಲ್ಲಿ ಕಾಣಬಹುದು].
ಭಗವಂತನೇ ‘ಧಾತಾ’. ಆತ ಅನಾಧಿ ಅನಂತಕಾಲದಲ್ಲಿ ಈ ಜಗತ್ತಿನ ಧಾರಣೆ ಮತ್ತು ಪೋಷಣೆ ಮಾಡುವವ. ಚತುರ್ಮುಖ ಬ್ರಹ್ಮನೊಳಗಿದ್ದು, ಪಿತಾಮಹ ಶಬ್ದ ವಾಚ್ಯನಾಗಿರುವವ ಭಗವಂತ.
ಇಲ್ಲಿ ಕೃಷ್ಣ ಕೇವಲ ಮುಖ್ಯವಾದ ಸಂಬಂಧವನ್ನು ಮಾತ್ರ ಹೇಳಿದ. ಇದರರ್ಥ ಎಲ್ಲಾ ಸಂಬಂಧದಲ್ಲಿಯೂ ಆ ಭಾವವನ್ನು ಜಾಗೃತಗೊಳಿಸುವವ ಅಂತರ್ಯಾಮಿ ಭಗವಂತ ಎಂಬುದು. ಪ್ರತಿಯೊಂದು ಸಂಬಂಧದ ಹಿಂದೆ ಭಗವಂತನ ಸಂಬಂಧವಿದೆ. ಆದರೆ ನಮಗೆ ಆ ಕಲ್ಪನೆ ಇರುವುದಿಲ್ಲ. ಆಯಾ ಜೀವದ ಪ್ರಾರಾಬ್ಧ ಕರ್ಮಕ್ಕನುಗುಣವಾಗಿ ಸಂಬಂಧಗಳು. ಅಲ್ಲಿರುವ ಪ್ರೀತಿ, ಮಮತೆ, ಶತ್ರುತ್ವ ಎಲ್ಲವೂ ಭಗವಂತನ ಕಾರ್ಯಕ್ರಮ. ಇದನ್ನು ನಾವು ತಿಳಿದಾಗ ನಮ್ಮ ಜೀವನ ಸುಗಮ. ಒಬ್ಬರು ನಮ್ಮನ್ನು ದ್ವೇಷಿಸಿದಾಗ ಕುಗ್ಗುವ ಅಗತ್ಯವಾಗಲೀ, ಒಬ್ಬರು ನಮ್ಮನ್ನು ಪ್ರೀತಿಸಿದಾಗ ಹಿಗ್ಗುವ ಅಗತ್ಯವಾಗಲೀ ಇಲ್ಲ. ಎಲ್ಲವೂ ನಮ್ಮ ಜೀವಸ್ವಭಾವ ಮತ್ತು ಪ್ರರಾಬ್ಧಕರ್ಮಕ್ಕನುಗುಣವಾಗಿ ಭಗವಂತನ ಲೀಲೆ ಎನ್ನುವ ಎಚ್ಚರ ಇಲ್ಲಿ ಬಹಳ ಮುಖ್ಯ. ಇದಕ್ಕೆ ಒಂದು ಉತ್ತಮ ದೃಷ್ಟಾಂತ ಭಾಗವತದಲ್ಲಿ ಬರುವ ವೃತ್ರ ಮತ್ತು ಇಂದ್ರನ ಯುದ್ಧದ ಕಥೆ: ಇಂದ್ರನನ್ನು ಕೊಲ್ಲಲು ಹೊರಟ ವೃತ್ರನ ತಂದೆ ತ್ವಸ್ಥ ಎಂಬುವನು ಉಚ್ಚರಿಸಿದ ಮಂತ್ರದಲ್ಲಿ ಒಂದು ಸ್ವರ ತಪ್ಪಾಗಿದ್ದರಿಂದ-ವೃತ್ರನಿಂದ ಇಂದ್ರಹತ್ಯೆಯಾಗುವ ಬದಲು, ಇಂದ್ರನೇ ವೃತ್ರನನ್ನು ಕೊಲ್ಲುವಂತಾಯಿತು. ವೃತ್ರ ಮತ್ತು ಇಂದ್ರರ ಯುದ್ಧದಲ್ಲಿ ಇಂದ್ರ ಮಹಾಜ್ಞಾನಿಯಾದ ವೃತ್ರನನ್ನು ಕೊಲ್ಲಲು ಹಿಂದೇಟು ಹಾಕುತ್ತಾನೆ. ಆಗ ವೃತ್ರ ಹೇಳುತ್ತಾನೆ “ಸಂಕೋಚ ಪಡಬೇಡ ಇಂದ್ರ, ನನ್ನನ್ನು ಕೊಂದುಬಿಡು. ಏಕೆಂದರೆ ಈ ನಾಟಕದಲ್ಲಿ ಭಗವಂತ ನಿನಗೆ ಕೊಲ್ಲುವ ಪಾತ್ರವನ್ನೂ ಮತ್ತು ನನಗೆ ಸಾಯುವ ಪಾತ್ರವನ್ನೂ ಕೊಟ್ಟಿದ್ದಾನೆ. ನಾವು ಅದನ್ನು ಅಭಿನಯಿಸಬೇಕು ಅಷ್ಟೇ” ಎಂದು. ಈ ರೀತಿ ಎಚ್ಚರವಿದ್ದರೆ ನಮಗೆ ಇನ್ನೊಬ್ಬರು ಬೈದಾಗ ಅಥವಾ ದ್ವೇಶಿಸಿದಾಗ ಬೇಸರವಾಗುವುದಿಲ್ಲ. ಎಲ್ಲವೂ ಭಗವಂತನ ವ್ಯವಸ್ಥೆ ಎಂದು ತಿಳಿದಾಗ ಎಲ್ಲವೂ ಏಕರೂಪವಾಗಿ ಕಾಣುತ್ತದೆ. ದ್ವೇಷ ಮತ್ತು ಪ್ರೀತಿ ಸಹಜವಾಗಿ ಬಿಡುತ್ತದೆ. ಸಂಬಂಧ ಕಳಚಿದಾಗ ಕುಗ್ಗುವುದಾಗಲೀ, ಬೆಸೆದಾಗ ಹಿಗ್ಗುವುದಾಗಲೀ ಇರುವುದಿಲ್ಲ. ಇದು ಬಹಳ ಎತ್ತರದ ಸ್ಥಿತಿ.
ಒಟ್ಟಿನಲ್ಲಿ ಕೃಷ್ಣ ಇಲ್ಲಿ ಹೇಳಿರುವ ವಿಚಾರವೆಂದರೆ: ಎಲ್ಲಾ ಸಂಬಂಧದ ಹಿಂದೆ ಇರುವವನು ಆ ಭಗವಂತ. ಎಲ್ಲರ ಒಳಗೂ ‘ಎಲ್ಲರೂ’ ಆಗಿ ಆತ ತುಂಬಿದ್ದಾನೆ. ಒಂದೊಂದು ರೂಪದಲ್ಲಿ, ಅವರವರಲ್ಲಿ, ಆಯಾ ಕ್ರಿಯೆಗಳನ್ನು ಮಾಡಿಸುತ್ತಾನೆ. ಇದು ನಾವು ಅನುಸಂಧಾನ ಮಾಡಬೇಕಾದ ವಿಜ್ಞಾನ.
ಕ್ರಿಯೆ, ಸಂಬಂಧಗಳನ್ನು ವಿವರಿಸಿದ ಕೃಷ್ಣ ಈಗ ಜ್ಞಾನದ ಬಗ್ಗೆ ವಿವರಿಸುತ್ತಾನೆ.  ಕೃಷ್ಣ ಹೇಳುತ್ತಾನೆ “ವೇದ್ಯಂ ಪವಿತ್ರಮೋಂಕಾರ ಋಕ್ ಸಾಮ ಯಜುರೇವ ಚ” ಎಂದು. ನಾಮಾತ್ಮಕವಾದ ಈ ಪ್ರಪಂಚದ ಎಲ್ಲ ನಾಮಗಳ ಮೂಲ ‘ಓಂ’. ಕೃಷ್ಣ ಹೇಳುತ್ತಾನೆ: “ನಾನು ಓಂಕಾರ” ಎಂದು. ಪ್ರಪಂಚದಲ್ಲಿನ ಎಲ್ಲಾ ಶಬ್ದವೂ ಹುಟ್ಟಿದ್ದು ಓಂಕಾರದಿಂದ. ಆದ್ದರಿಂದ ಭಗವಂತ ಸರ್ವಶಬ್ದವಾಚ್ಯ. ಸಂಸ್ಕೃತದಲ್ಲಿನ ಎಲ್ಲಾ ಶಬ್ದಗಳೂ ಕೂಡಾ ಓಂಕಾರದಿಂದ ಆವಿರ್ಬಾವಗೊಂಡ ಶಬ್ದಗಳು. ಅದು ಹೇಗೆಂದು ನೋಡೋಣ:
ವೈದಿಕವಾಙ್ಮಯದ ಮೂಲಾಕ್ಷರವಾದ ಓಂಕಾರದಲ್ಲಿ ಎಂಟು ಅಕ್ಷರಗಳು: ಅಕಾರ, ಉಕಾರ, ಮಕಾರ, ನಾದ, ಬಿಂದು, ಕಲೆ, ಶಾಂತ, ಅತಿಶಾಂತ. ಇದರಿಂದ ವ್ಯಕ್ತವಾದದ್ದು ನಾರಾಯಣಾಷ್ಟಾಕ್ಷರ: ‘ಓಂ ನಮೋ ನಾರಾಯಣಾಯ’.  ಓಂಕಾರದ ಎಂಟು ಮೂಲವರ್ಣಗಳಿಂದ ಅಕ್ಷರ ಮಾಲಿಕೆಯ ಎಂಟು ವರ್ಗಗಳು ರೂಪುಗೊಂಡವು:
೧. ಸ್ವರಾಕ್ಷರಗಳು: ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ
೨. ಕ ವರ್ಗ: ಕ ಖ ಗ ಘ ಙ
೩. ಚ ವರ್ಗ: ಚ ಛ ಜ ಝ ಞ
೪. ಟ ವರ್ಗ : ಟ ಠ ಡ ಢ ಣ
೫. ತ ವರ್ಗ: ತ ಥ ದ ಧ ನ
೬. ಪ ವರ್ಗ: ಪ ಫ ಬ ಭ ಮ
೭.ಅಂತಸ್ಥಾಕ್ಷರಗಳು: ಯ ರ ಲ ವ
೮. ಕೊನೆಯ ಆರು ಅಕ್ಷರಗಳು: ಶ ಷ ಸ ಹ ಳ ಕ್ಷ
ಒಟ್ಟು 'ಅ' ದಿಂದ 'ಕ್ಷ' ತನಕ ಐವತ್ತೊಂದು ಅಕ್ಷರಗಳು(ಅ ದಿಂದ ಕ್ಷ ತನಕ ಆದ್ದರಿಂದ ಅ-ಕ್ಷ-ರ). ಇಡೀ ಪ್ರಪಂಚದಲ್ಲಿರುವ ಎಲ್ಲಾ ಶಬ್ದಗಳೂ ಈ ಅಕ್ಷರಗಳ ಸಂಯೋಜನೆ. ಎಲ್ಲಾ ಶಬ್ದಗಳೂ ಓಂಕಾರದಿಂದ ಹುಟ್ಟಿರುವುದರಿಂದ ಓಂಕಾರ ವಾಚ್ಯ ಭಗವಂತ ಸರ್ವ ಶಬ್ದವಾಚ್ಯ. ಆದ್ದರಿಂದ ಎಲ್ಲಾ ಶಬ್ದಗಳ ಮೂಲಭೂತ ಪವಿತ್ರ ಅರ್ಥ ಭಗವಂತನನ್ನು ಹೇಳುತ್ತದೆ.  ದೋಷವನ್ನು ಹೇಳುವ ಪದಗಳೂ ಕೂಡಾ ಭಗವಂತನಲ್ಲಿ ಕೇವಲ ಪವಿತ್ರ ಅರ್ಥವನ್ನು ಮಾತ್ರ ಹೇಳುತ್ತವೆ. ಉದಾಹರಣೆಗೆ ‘ದುಃಖಿ’. ಇದು ಭಗವಂತನಲ್ಲಿ ಹೇಳುವಾಗ ‘ದುಃಖದ ಒಡೆಯ ಎನ್ನುವ ಅರ್ಥವನ್ನು ಕೊಡುತ್ತದೆ.  
ಐವತ್ತೊಂದು ಅಕ್ಷರಗಳಿಂದ(ಮಾತೃಕೆಗಳಿಂದ) ವಾಚ್ಯನಾದ ಭಗವಂತನ ರೂಪಗಳೂ ಐವತ್ತೊಂದು:
೧. ಅಜ, ೨. ಆನಂದ, ೩. ಇಂದ್ರ,  ೩. ಈಶ, ೪. ಉಗ್ರ, ೫. ಊರ್ಜ, ೭. ಋತಂಭರ, ೮. ೠಘ, ೯. ಲ್ ಶ, ೧೦. ಲ್ೕಜಿ, ೧೧. ಏಕಾತ್ಮ , ೧೨. ಐರ, ೧೩. ಓಜೋಭೃತ್, ೧೪. ಔರಸ, ೧೫. ಅಂತ, ೧೬. ಅರ್ಧಗರ್ಭ, ೧೭. ಕಪಿಲ, ೧೮. ಖಪತಿ, ೧೯. ಗರುಡಾಸನ, ೨೦. ಘರ್ಮ, ೨೧. ಙಸಾರ ೨೨. ಚಾರ್ವಾಂಗ, ೨೩. ಛಂದೋಗಮ್ಯ, ೨೪. ಜನಾರ್ದನ, ೨೫. ಝೂಟಿತಾರಿ, ೨೬. ಞಮ, ೨೭.ಟಂಕಿ, ೨೮.ಠಕಲ, ೨೯. ಡರಕ, ೩೦.ಢರಿ, ೩೧. ಣಾತ್ಮ, ೩೨. ತಾರ, ೩೩. ಥಭ, ೩೪. ದಂಡಿ, ೩೫. ಧನ್ವಿ, ೩೬. ನಮ್ಯ, ೩೭. ಪರ, ೩೮. ಫಲಿ, ೩೯. ಬಲಿ, ೪೦. ಭಗ, ೪೧. ಮನು, ೪೨. ಯಜ್ಞ, ೪೩. ರಾಮ, ೪೪. ಲಕ್ಷ್ಮೀಪತಿ, ೪೫. ವರ, ೪೬. ಶಾಂತಸಂವಿತ್, ೪೭. ಷಡ್ಗುಣ, ೪೮. ಸಾರಾತ್ಮ, ೪೯. ಹಂಸ, ೫೦. ಳಾಳುಕ, ೫೧. ನೃಸಿಂಹ[ನೃಹರ್ಯಕ್ಷ].
ಓಂಕಾರದ ಮೂಲ ಮೂರಕ್ಷರ ಅ-ಉ-ಮ ಪದ್ಯ-ಗದ್ಯ-ಗಾನ ರೂಪದ ಮೂರು ವೇದವನ್ನು ಮತ್ತು ವೇದ ಪ್ರತಿಪಾದ್ಯ ಭಗವಂತನನ್ನು ಹೇಳುತ್ತವೆ. ಕಾರ ಋಗ್ವೇದಕ್ಕೆ, ‘ಕಾರ ಯಜುರ್ವೇದಕ್ಕೆ ಮತ್ತು ಕಾರ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಋಗ್ವೇದ " ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾರಂ ರತ್ನ ಧಾತಮಂ |..."  ಎಂದು ಕಾರದಿಂದ ಪ್ರಾರಂಭವಾಗುತ್ತದೆ. ಮತ್ತು “....ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ಹಃ: | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥ಎಂದು ಕಾರದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದುವರಿದು ಯಜುರ್ವೇದ ಇಷೇ ತ್ವೋರ್ಜೆ ತ್ವಾ …” ಎಂದು ಕಾರದಿಂದ ಪ್ರಾರಂಭವಾಗಿ “……..ಸಮುದ್ರೋ ಬಂಧುಃಎಂದು ಕಾರದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಓಂಕಾರದಲ್ಲಿನ ಕಾರ ಮತ್ತು ಕಾರ ಋಗ್ವೇದ ಮತ್ತು ಯಜುರ್ವೇದವನ್ನು ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ(abbreviation)ರೂಪ. ಇಲ್ಲಿಂದ ಮುಂದೆ ಸಾಮವೇದ. ಸಾಮವೇದ ಅಗ್ನ ಆ ಯಾಹಿ ………” ಎಂದು ಕಾರದಿಂದ ಆರಂಭವಾಗಿ “……ಬ್ರ್ಹಸ್ಪತಿರ್ದಧಾತುಎಂದು ಕಾರದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ ಇಲ್ಲಿ ಕಾರ ಬಂದಿಲ್ಲ. ಆದರೆ ನಮಗೆ ತಿಳಿದಂತೆ ಸಾಮವೇದ ನಾದ ರೂಪದಲ್ಲಿದೆ. ಓಂಕಾರದಲ್ಲಿ ಕೂಡಾ ಎನ್ನುವುದು ನಾದರೂಪದಲ್ಲಿ ಹೊರ ಹೊಮ್ಮುವ ಅಕ್ಷರ- ಅದು ಸಂಗೀತ. ಹೀಗೆ ಓಂಕಾರ ವೇದದ ಸಂಕ್ಷೇಪಣಾರೂಪ ಬೀಜಾಕ್ಷರ. ಇದು ನಮಗೆ ವೇದವನ್ನು ಗುರುತಿಸುವ ಮಾರ್ಗದರ್ಶಿ. ಆದ್ದರಿಂದ  ಓಂಕಾರ ಭಗವಂತನನ್ನು ಸ್ತೋತ್ರ ಮಾಡುವ ಮಂತ್ರಗಳಲ್ಲಿ ಅತ್ಯಂತ ಪ್ರಕೃಷ್ಟವಾದುದ್ದು. ಇದಕ್ಕಿಂತ ದೊಡ್ಡ ಸ್ತೋತ್ರಮಾಡುವ ಶಬ್ದ ಈ ಪ್ರಪಂಚದಲ್ಲಿಲ್ಲ. ಈ ಕಾರಣದಿಂದ ಓಂಕಾರ ಭಗವಂತನನ್ನು ನಾವು ಕರೆಯಲು ಬಳಸುವ ಅವನ ವಿಶೇಷ(Exclusive)ನಾಮ.
ಓಂಕಾರ ವಿಸ್ತೃತವಾದಾಗ ವ್ಯಾಹೃತಿ, ವ್ಯಾಹೃತಿ ವಿಸ್ತಾರವಾಗಿ ಗಾಯತ್ರಿ, ಗಾಯತ್ರಿ ವಿಸ್ತಾರವಾಗಿ ಕುರುಡ ಸೂಕ್ತನಂತರ ಮೂರು ವೇದಗಳು, ಅಲ್ಲಿಂದ ಸಮಸ್ತ ವೇದಗಳು. ಹೀಗೆ ಪ್ರಣವದಲ್ಲಿ, ವ್ಯಾಹೃತಿಯಲ್ಲಿ, ಪುರುಷ ಸೂಕ್ತದಲ್ಲಿ, ಸಮಸ್ತವೇದಗಳಲ್ಲಿ ಭಗವಂತ ನೆಲೆಸಿದ್ದಾನೆ. ಓಂಕಾರದ ಬಗ್ಗೆ ಅಧ್ಯಾಯ ಏಳರಲ್ಲಿ(ಶ್ಲೋಕ -೦೮) ವಿಶೇಷವಾಗಿ ವಿವರಿಸಲಾಗಿದೆ. 
ವೇದದ ಶಬ್ದಗಳಿಂದಲೇ ಹುಟ್ಟಿ ಬಂದ ಪ್ರಪಂಚದ ಎಲ್ಲಾ ಶಬ್ದದಲ್ಲೂ ಎಲ್ಲಾ ಲೌಕಿಕ ನಾದದಲ್ಲೂ  ತುಂಬಿದ ಭಗವಂತ, ಆಕಾಶದಲ್ಲಿ ಅನಂತ ಶಬ್ದಗಳನ್ನೂ, ಅನಂತ ನಾದಗಳನ್ನು ಸೃಷ್ಟಿ ಮಾಡಿದ. ನಮಗೆ ಶಬ್ದದಿಂದ ಅನಂತ ಅನುಭವವನ್ನು ಕೊಟ್ಟು, ಆ ಶಬ್ದವನ್ನು ಗ್ರಹಿಸುವ ಮತ್ತು ಗ್ರಹಿಸಿ ಪುನರುಚ್ಛರಿಸುವ ವಿಶೇಷ ಶಕ್ತಿಯನ್ನು ಕರುಣಿಸಿದ. ಜ್ಞಾನದ ಮೂಲಕ ಈ ಶಬ್ದ ನಾಮಕ ಭಗವಂತನನ್ನು ತಿಳಿಯುವ ವಿಶೇಷ ಶಕ್ತಿ ಮಾನವನಿಗೆ ಭಗವಂತನ ವಿಶೇಷ ಕೊಡುಗೆ.
ಭಗವಂತ ‘ಋಕ್’: ಯಾವುದರಿಂದ ನಾವು ಭಗವಂತನನ್ನು ಅರ್ಚನೆ ಮಾಡುತ್ತೇವೆ ಅದು ಋಕ್. ಅದು ಮಂತ್ರಗಳು. ಯಾರು ಅರ್ಚಿಸಲ್ಪಡುತ್ತಾನೋ ಅವನು ಋಕ್ ನಾಮಕ ಭಗವಂತ. ಎಲ್ಲಾ ಮಂತ್ರಗಳಿಂದ ಅರ್ಚಿಸಲ್ಪಡುವವ-ಸ್ತುತಿಗೆ ಪಾತ್ರನಾದ ಭಗವಂತ ‘ಋಕ್’
ಭಗವಂತ ‘ಸಾಮಃ’: ಎಲ್ಲವನ್ನು ಸಮೀಕರಿಸಿದವನು. ತನ್ನ ಎಲ್ಲ ರೂಪದಲ್ಲಿ ಜ್ಞಾನಾನಂದಾದಿ ಗುಣಗಳಿಂದ ಸಮನಾದ್ದರಿಂದ ಮತ್ತು ಅವರವರ ಯೋಗ್ಯತೆಗೆ ಸಮನಾಗಿ ಜೀವನ ಕೊಡುವ ಭಗವಂತ ‘ಸಾಮಃ’.
ಭಗವಂತ ‘ಯಜುಸ್’: ಎಲ್ಲ ಯಾಗಗಳಿಂದ ಹೊಮಿಸಲ್ಪಡುವ, ವೇದಗಳಲ್ಲಿ ಸನ್ನಿಹಿತನಾಗಿರುವ ಸರ್ವಶಬ್ದವಾಚ್ಯ ಭಗವಂತ ‘ಯಜುಸ್’.

No comments:

Post a Comment